BREAKING : ‘ಸಿಎಂ ಸಿದ್ದರಾಮಯ್ಯ’ ವಿರುದ್ಧ ಪ್ರಾಸಿಕ್ಯೂಷನ್ : ಮಧ್ಯಾಹ್ನ 2 :30 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೊರೆ  ಹೋಗಿದ್ದಾರೆ. ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ   ನಡೆಯುತ್ತಿದ್ದು, ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಮಧ್ಯಾಹ್ನ 2:30 ಕ್ಕೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದರು. . ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್  ಮೆಹ್ತಾ ವಾದ ಮಂಡಿಸಿದರು.

17 ಎ ಅಡಿಯಲ್ಲಿ ಲೋಪವಿದೆಯೋ ಇಲ್ಲವೇ ಎಂಬುದನ್ನು ಮಾತ್ರ ನೋಡಬೇಕು. ರಾಜ್ಯಪಾಲರು ಕ್ರಮ ಮಾತ್ರ ತೆಗೆದುಕೊಂಡರು. ಅವರೇನು ಅಂತಿಮ ತೀರ್ಪು ನೀಡಿಲ್ಲ. ಎಲ್ಲಾ ಲೋಪಗಳನ್ನು ಗಂಡ ಹೆಂಡತಿ ಮೇಲೆ ಹಾಕಬಾರದು. ಕೆಲವು ವಿವೇಚನಗಳನ್ನು ಬಳಸಿ ರಾಜ್ಯಪಾಲರು ತೀರ್ಮಾನ ತೆಗೆದುಕೊಂಡರು. ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಲೇಬೇಕೆಂಬ ನಿಯಮವಿಲ್ಲ, ರಾಜ್ಯಪಾಲರು ತನಿಖೆಗೆ ಮೊದಲೇ ಎಲ್ಲವನ್ನೂ ಹೇಳಬೇಕು ಎಂದು ಇಲ್ಲ. ಎಂದು ತುಷಾರ್ ಮೆಹ್ತಾ ವಾದ ಮಂಡಿಸಿದರು. ತನಿಖೆ ಹಂತದಲ್ಲಿ ತನಿಖಾಧಿಕಾರಿ ಪರಿಶೀಲನೆ ಮಾಡಬೇಕು. ಅದು ತನಿಖಾಧಿಕಾರಿ ಜವಾಬ್ದಾರಿ. ರಾಜ್ಯಪಾಲರು ಎಲ್ಲವನ್ನೂ ತನಿಖೆ ಮಾಡೋಕೆ ಆಗುತ್ತಾ ಎಂದು  ತುಷಾರ್  ಮೆಹ್ತಾ  ತಮ್ಮ ವಾದ ಮಂಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read