ನವದೆಹಲಿ: ಹರಿಯಾಣದ ಶಿಖೋಪುರ್ ಭೂ ವ್ಯವಹಾರಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಸಮನ್ಸ್ ಹೊರಡಿಸಿದ ನಂತರ ಉದ್ಯಮಿ ರಾಬರ್ಟ್ ವರ್ದ್ರಾ ಮಂಗಳವಾರ ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು.
ಈ ಪ್ರಕರಣದಲ್ಲಿ ವಿಚಾರಣೆಗಾಗಿ ಅವರಿಗೆ ನೀಡಲಾದ ಎರಡನೇ ಸಮನ್ಸ್ ಇದಾಗಿದೆ. ಇಡಿ ಕಚೇರಿಯ ಹೊರಗೆ, ವಾದ್ರಾ ವರದಿಗಾರರತ್ತ ಕೈ ಬೀಸುತ್ತಿರುವುದು ಕಂಡುಬಂದಿದೆ.ಆರಂಭದಲ್ಲಿ ಏಪ್ರಿಲ್ 8 ರಂದು ವಾದ್ರಾ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ಆದರೆ, ಅವರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿರಲಿಲ್ಲ.
ವಿಚಾರಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ನಮ್ಮ ದಾಖಲೆಗಳನ್ನು ನೀಡುತ್ತಿದ್ದೇವೆ ಎಂದು ನಾವು ಇಡಿಗೆ ತಿಳಿಸಿದ್ದೇವೆ, ನಾನು ಯಾವಾಗಲೂ ವಿಚಾರಣೆಗೆ ಬರಲು ಸಿದ್ಧನಿದ್ದೇನೆ ಎಂದರು.
“ಈ ಪ್ರಕರಣದಲ್ಲಿ ಏನೂ ಇಲ್ಲ. ನಾನು ದೇಶದ ಪರವಾಗಿ ಮಾತನಾಡುವಾಗ, ನನ್ನನ್ನು ತಡೆಯಲಾಗುತ್ತದೆ, ರಾಹುಲ್ ಅವರನ್ನು ಸಂಸತ್ತಿನಲ್ಲಿ ಮಾತನಾಡದಂತೆ ತಡೆಯಲಾಗುತ್ತದೆ. ಬಿಜೆಪಿ ಅದನ್ನು ಮಾಡುತ್ತಿದೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಾದ್ರಾ ಹೇಳಿದ್ದಾರೆ.
#WATCH | Delhi: Businessman Robert Vadra reaches the ED office after being summoned in connection with a Gurugram land case. pic.twitter.com/aCw5wvOCsW
— ANI (@ANI) April 15, 2025