ಕೋಲಾರ : ಮೂರು ದಿನಗಳಿಂದ ಕಾಣೆಯಾಗಿದ್ದ 9 ನೇ ತರಗತಿ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿರುವ ಘಟನೆ ಹೊಸಕೋಟೆಯ ಬಾಣರಹಳ್ಳಿಯಲ್ಲಿ ನಡೆದಿದೆ.
ಮಾಲೂರು ತಾಲೂಕಿನ ದೊಮ್ಮಲೂರಿನ ನಿವಾಸಿಯಾದ ವಿದ್ಯಾರ್ಥಿನಿ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದು, ಇಂದು ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದು. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಬಾಲಕಿಯನ್ನು ಬರಗೂರು ಗ್ರಾಮದ ನಿತಿನ್ ಎಂಬಾತ ಅಪಹರಣ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಕತ್ತು ಕೊಯ್ದುಕೊಂಡು ಬಾಲಕಿ ಮನೆ ಮುಂದೆ ಬಂದಿದ್ದ. ಇದೀಗ ನಿತಿನ್ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.