ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಮೈಸೂರು ಅರಮನೆಗೆ ದಸರಾ ಆನೆಗಳು ಆಗಮಿಸಲಿವೆ.
ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಮೈಸೂರಿಗೆ ಬರಲಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಗಜ ಪಡೆ ತೆರಳಲಿದ್ದು, ಗಜ ಪಯಣಕ್ಕೆ ಸಚಿವ ಹೆಚ್.ಸಿ. ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಗಜಪಡೆಗೆ ಪೂಜೆ ನಿಗದಿ ಮಾಡಲಾಗಿದೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿವೆ. ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಮೈಸೂರಿಗೆ ಬರಲಿವೆ. ಮೊದಲ ಹಂತದಲ್ಲಿ 9 ಗಂಡಾನೆಗಳು ಮತ್ತು ಎರಡು ಹೆಣ್ಣಾನೆಗಳು ಬರಲಿವೆ.
ಅಭಿಮನ್ಯು, ಭೀಮ, ಕಂಜನ್, ಧನಂಜಯ, ಪ್ರಶಾಂತ್, ಮಹೇಂದ್ರ, ಏಕಲವ್ಯ, ಕಾವೇರಿ, ಲಕ್ಷ್ಮಿ ಆನೆಗಳು ದಸರಾ ಮಹೋತ್ಸವದಲ್ಲಿ ಭಾಗವಹಿಸಲಿವೆ. ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ 59 ವರ್ಷದ ಅಭಿಮನ್ಯು ವಿಜಯ ದಶಮಿ ಎಂದು ಚಿನ್ನದ ಅಂಬಾರಿ ಹೊರಲಿದೆ.