ಬೆಂಗಳೂರು: ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ 14 ಲಕ್ಷ ರೂಪಾಯಿ ವಂಚಿಸಿದ್ದ ಖಾಸಗಿ ಕಂಪನಿಯ ಹೆಚ್.ಆರ್. ಬಂಧಿಸಲಾಗಿದೆ.
ಬೆಂಗಳೂರು ಸಿಸಿಬಿ ಪೊಲೀಸರು ವಂಚಕ ಹೆಚ್.ಆರ್.ನನ್ನು ಬಂಧಿಸಿದ್ದಾರೆ. ಹೆಚ್.ಆರ್. ಪತ್ನೂಲ್ ಕಲಂದರ್ ಖಾನ್ ನನ್ನು ಬಂಧಿಸಲಾಗಿದೆ. ಎಂಟು ಅಭ್ಯರ್ಥಿಗಳಿಗೆ ಕಲಂದರ್ ಖಾನ್ 14.23 ಲಕ್ಷ ರೂ. ವಂಚಿಸಿದ್ದಾನೆ. ಬಿಟಿಎಂ ಲೇಔಟ್ ನ ಕಂಪನಿಯೊಂದರಲ್ಲಿ ಹೆಚ್.ಆರ್. ಆಗಿ ಕಾರ್ಯನಿರ್ವಹಿಸುತ್ತಿದ್ದ ಕಲಂದರ್ ಖಾನ್ ಕೆಲಸ ಅರಸಿ ಬರುವ ಅಭ್ಯರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ.
ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸದ ಆಮಿಷ ತೋರಿಸಿ ವಂಚಿಸಿ 2.70 ಲಕ್ಷ ರೂ. ಹಣಕ್ಕೆ ಬೇಡಿಕೆ ಇಡುತ್ತಿದ್ದ ವಂಚಕ ಹಂತ ಹಂತವಾಗಿ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದ. ಮೋಸ ಹೋದ ಗೀತಾ ಎಂಬ ಯುವತಿ ದೂರು ನೀಡಿದ್ದರು. ಯುವತಿಯ ದೂರು ಆಧರಿಸಿ ಆರೋಪಿಯನ್ನು ಸಿಸಿಬಿ ಬಂಧಿಸಿದೆ. ಕಲಂದರ್ ಗೆ ಸಹಾಯ ಮಾಡಿದ ಮತ್ತಿಬ್ಬರಿಗಾಗಿ ಶೋಧ ಕೈಗೊಳ್ಳಲಾಗಿದೆ. ವೀರೇಶ್, ಇನಾಯತ್ ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತನಿಂದ 1.50 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ.