BREAKING : ಕೇರಳದಲ್ಲಿ ಫುಟ್’ಬಾಲ್ ಪಂದ್ಯ ಉದ್ಘಾಟನೆ ವೇಳೆ ಪಟಾಕಿ ಸ್ಪೋಟ : 30 ಕ್ಕೂ ಹೆಚ್ಚು ಮಂದಿಗೆ ಗಾಯ |WATCH VIDEO

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ಭಾರಿ ಪಟಾಕಿ ಸ್ಫೋಟ ಸಂಭವಿಸಿದ್ದು, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಫುಟ್ಬಾಲ್ ಪಂದ್ಯ ಪ್ರಾರಂಭವಾಗುವ ಸ್ವಲ್ಪ ಮೊದಲು ಈ ಘಟನೆ ನಡೆದಿದ್ದು, ಪಟಾಕಿಗಳು, ರಾಕೆಟ್ ಗಳು ಪ್ರೇಕ್ಷಕತ್ತ ಹಾರಿದೆ. ಪರಿಣಾಮ ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ವರದಿಗಳ ಪ್ರಕಾರ, ಅಂತಿಮ ಫುಟ್ಬಾಲ್ ಪಂದ್ಯದ ಸಮಯದಲ್ಲಿ ತೇರಟ್ಟಮ್ಮಲ್ನಲ್ಲಿರುವ ಅರೆಕೋಡ್ ಬಳಿ ಪಟಾಕಿ ಸ್ಫೋಟ ಘಟನೆ ಸಂಭವಿಸಿದೆ.

ಪ್ರೇಕ್ಷಕರು ಕುಳಿತು ಪಂದ್ಯಕ್ಕಾಗಿ ಕಾಯುತ್ತಿದ್ದ ಮೈದಾನದಾದ್ಯಂತ ಪಟಾಕಿಗಳು ಸ್ಫೋಟಗೊಂಡು ವೇಗವಾಗಿ ಹರಡಿದವು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಾಹಿತಿಯ ಪ್ರಕಾರ, ಯುನೈಟೆಡ್ ಎಫ್ ಸಿ ನೆಲ್ಲಿಕುತ್ ಮತ್ತು ಕೆಎಂಜಿ ಮಾವೂರ್ ನಡುವಿನ ಫೈನಲ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read