ಶಿವಮೊಗ್ಗ: ಹಣಕಾಸು ವಿಚಾರಕ್ಕೆ ಗಲಾಟೆಯಾಗಿ ಸಾಲ ನೀಡಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ. ಸೈಯ್ಯದ್ ತೌಫಿಕ್ ಅಲಿಯಾಸ್ ಚೋಟು ಮೇಲೆ ಲಾಂಗ್, ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮೂಡಲ ವಿಠಲಾಪುರದಲ್ಲಿ ನಡೆದಿದೆ.
ಫಯಾದ್ ಮತ್ತು ಗ್ಯಾಂಗ್ ನಿಂದ ದಾಳಿ ನಡೆದಿದೆ. ಹೋಟೆಲ್ ನಲ್ಲಿ ಸೈಯದ್ ತಿಂಡಿ ತಿನ್ನುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಸೈಯದ್ ಗೆ ಫಯಾದ್ ಒಂದೂವರೆ ಲಕ್ಷ ರೂಪಾಯಿ ಹಣ ನೀಡಬೇಕಿತ್ತು. ಹಣದ ವಿಚಾರವಾಗಿ ನಿನ್ನೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಸಯ್ಯದ್ ಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಾರ್ ನಲ್ಲಿ ಬಂದು ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.