BREAKING : ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಸಹೋದರ ‘ಚೈತನ್ಯ’ ವಿಧಿವಶ.!

ಬೆಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ನಿರೂಪಕಿ ಅಪರ್ಣ ಅವರ ಸಹೋದರ ಚೈತನ್ಯ ಕೂಡ ಇಂದು ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಅಪರ್ಣಾ ಅವರ ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ಹಂಚಿಕೊಂಡಿದ್ದಾರೆ.

‘’ ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ ನಡುರಾತ್ರಿಯಲ್ಲಿ ಈ ಇಹತೊರೆದು ಸರಿದಿದ್ದಾರೆ. ತೀವ್ರತಮ ವಿಷಾದ.
ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ. ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲರದೂನು’ನಮಸ್ಕಾರ…ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಮದುವೆ ಸಂದರ್ಭದಲ್ಲಿ ಚೈತನ್ಯ ನಾರಾಯಣಸ್ವಾಮಿ ಇರುವ ಫೋಟೋವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

 

 

 

 

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read