BREAKING: ಐಶ್ವರ್ಯ ಗೌಡ ವಂಚನೆ ಪ್ರಕರಣ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ಇಡಿ ತನಿಖೆ ಚುರುಕುಗೊಳಿಸಿದ್ದು, ಇಡಿ ಅಧಿಕಾರಿಗಳ ತನಿಖೆಯ ವೇಳೆ ಸ್ಪೋಟಕ ವಿಚಾರ ಬಹಿರಂಗವಾಗಿದೆ.

ಶಾಸಕ ವಿನಯ್ ಕುಲಕರ್ಣಿ ಮತ್ತು ಐಶ್ವರ್ಯ ಗೌಡ ಹಣದ ವ್ಯವಹಾರ ನಂಟಿನ ರಹಸ್ಯ ಬಯಲಾಗಿದೆ. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಐಶ್ವರ್ಯ ಸಹಾಯ ಮಾಡಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ. ವಿನಯ್ ಕುಲಕರ್ಣಿಯ ಬಳಿ ಐಶ್ವರ್ಯ 24 ಕೋಟಿ ರೂ. ವ್ಯವಹಾರ ಮಾಡಿದ್ದಲ್ಲದೆ, ಕಾಂಗ್ರೆಸ್ ನಾಯಕನೊಬ್ಬನ ಜೊತೆಗೂ ಐಶ್ವರ್ಯ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಿದ್ದರು ಎಂದು ಗೊತ್ತಾಗಿದೆ.

ಭಾರೀ ವ್ಯವಹಾರ ವಹಿವಾಟು ಮಾಡಿದ್ದರೂ ತೆರಿಗೆ ಪಾವತಿಸದೆ ಕಳ್ಳಾಟ ಮಾಡಿರುವುದು ಗೊತ್ತಾಗಿದೆ. ಐಶ್ವರ್ಯ ಬ್ಯಾಂಕ್ ಖಾತೆಯ ಮೂಲಕವೇ 75 ಕೋಟಿ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ವಿನಯ್ ಬಳಿ 24 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಐಶ್ವರ್ಯ ಪಡೆದುಕೊಂಡಿದ್ದರು. 24 ಕೋಟಿಗೆ ದಿನಕ್ಕೆ 24 ಲಕ್ಷ ಬಡ್ಡಿ ಕೊಡುವುದಾಗಿ ಹಣ ಪಡೆದಿದ್ದರು. ದಿನಕ್ಕೆ ಶೇಕಡ 1ರಷ್ಟು ಬಡ್ಡಿ ಕೊಡುತ್ತೇನೆ ಎಂದು ಐಶ್ವರ್ಯ ಗೌಡ ಹಣ ಪಡೆದುಕೊಂಡಿದ್ದರು. ಹಣ ಪಡೆದ ನಂತರ ಅಸಲು ಬಡ್ಡಿ ಕೊಡದೆ ಸಮಯ ಕೇಳಿಕೊಂಡಿದ್ದರು.

ಆಗ ಐಶ್ವರ್ಯ ಜೊತೆಗೆ ಮಾತುಕತೆ ನಡೆಸಿ ವಿನಯ್ ಕುಲಕರ್ಣಿ ಒಪ್ಪಂದ ಮಾಡಿಕೊಂಡಿದ್ದರು. 24 ಕೋಟಿಗೆ ಸ್ನೇಹಿತನ ಹೆಸರಿನಲ್ಲಿ ಕೈಸಾಲ ಪಡೆದಿರುವುದಾಗಿ ಅಗ್ರಿಮೆಂಟ್ ಜೊತೆಗೆ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡುವಂತೆ ವಿನಯ್ ಟಾಸ್ಕ್ ನೀಡಿದ್ದರು. ಹೀಗಾಗಿ ಐಶ್ವರ್ಯ ಮನೆಯಲ್ಲಿದ್ದ ಯೋಗೇಶ್ ಕೊಲೆ ಆರೋಪಿ ಲಕ್ಷ್ಮಣ್ ಇದ್ದರು.

24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿ ಕುಲಕರ್ಣಿ ಮನೆ ಮೇಲೆ ಇಡಿ ದಾಳಿ ನಡೆಸಿತ್ತು.

ಇಡಿ ಅಧಿಕಾರಿಗಳ ತನಿಖೆಯ ವೇಳೆ ಮತ್ತೊಂದು ಸ್ಪೋಟಕ ವಿಚಾರ ಬಹಿರಂಗವಾಗಿದ್ದು, ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ಜೊತೆಗೂ ಐಶ್ವರ್ಯ ಹಣ ವ್ಯವಹಾರ ನಡೆಸಿದ್ದಾರೆ. ತಿಬ್ಬೇಗೌಡ ಜೊತೆಗೆ ಸುಮಾರು 60 ಕೋಟಿ ರೂಪಾಯಿ ವಹಿವಾಟು ನಡೆಸಿರುವ ಮಾಹಿತಿ ಗೊತ್ತಾಗಿದೆ.

ಆರ್.ಆರ್. ನಗರದ ತಿಪ್ಪೇಗೌಡ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ತಿಬ್ಬೇಗೌಡ ಜೊತೆಗೆ ವ್ಯವಹಾರ ನಡೆಸಿದ 60 ಕೋಟಿ ಹಣ ಯಾರಿಗೆ ಸೇರಿದ್ದು ಎಂಬ ಕುರಿತು ತನಿಖೆ ನಡೆಸಲಾಗಿದೆ. ಹಣದ ಮೂಲ ಯಾವುದು ಎಂದು ಹೇಳಿ ತನಿಖೆ ಮುಂದುವರೆಸಿದೆ. ತಿಬ್ಬೇಗೌಡ ಮೊಬೈಲ್ ಸೀಜ್ ಮಾಡಿ, ಬ್ಯಾಂಕ್ ಪಾಸ್ ಬುಕ್ ವಶಕ್ಕೆ ಪಡೆಯಲಾಗಿದೆ. ಸದ್ಯದಲ್ಲಿ ತಿಬ್ಬೇಗೌಡಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಇಡಿ ಸಿದ್ಧತೆ ಮಾಡಿಕೊಂಡಿದೆ.

ಕೇವಲ ಮೂರು ವರ್ಷದಲ್ಲಿ ಐಶ್ವರ್ಯ 75 ಕೋಟಿ ವ್ಯವಹಾರ ಮಾಡಿದ್ದಾರೆ. ಕೇಸು ದಾಖಲಾಗುತ್ತಿದ್ದಂತೆ 46 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ತೆರಿಗೆ ಪಾವತಿಸಿದ್ದಾರೆ. ನಂತರ ತೆರಿಗೆ ಪಾವತಿಸಲು ಐಶ್ವರ್ಯ ಗೌಡ ಮುಂದಾಗಿದ್ದು, ಆದರೆ ರಿಜೆಕ್ಟ್ ಮಾಡಿ ಆದಾಯ ತೆರಿಗೆ ಅಧಿಕಾರಿಗಳು ಕಳುಹಿಸಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read