BREAKING: EVM, ವಿವಿಪ್ಯಾಟ್ ಮಷಿನ್ ಒಡೆದು ಹಾಕಿ ಗ್ರಾಮಸ್ಥರ ಆಕ್ರೋಶ; ಮಸಬಿನಾಳದಲ್ಲಿ ಬಿಗುವಿನ ವಾತಾವರಣ

ವಿಜಯಪುರ: ವಿಧಾನಸಭಾ ಚುನಾವಣಾ ಮತದಾನದ ಪ್ರಕ್ರಿಯೆ ವೇಳೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮ ರಣಾಂಗಣವಾಗಿದೆ. ಗ್ರಾಮಸ್ಥರು ಇವಿಎಂ, ವಿವಿ ಪ್ಯಾಟ್ ಮಷಿನ್ ಗಳನ್ನು ಒಡೆದು, ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಯ್ದಿರಿಸಿದ್ದ ಇವಿಎಂ, ವಿವಿಪ್ಯಾಟ್ ಮಷಿನ್ ಗಳನ್ನು ಅಧಿಕಾರಿಗಳು ಕೊಂಡೊಯ್ಯುತ್ತಿದ್ದರು. ಈ ವೇಳೆ ಮತದಾನವನ್ನು ಅರ್ಧಕ್ಕೆ ಸ್ಥಗಿತಗೊಳಿಸುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಕಾರನ್ನು ಪಲ್ಟಿ ಮಾಡಿ, ಇವಿಎಂ, ವಿವಿ ಪ್ಯಾಟ್ ಮಷಿನ್ ಗಳನ್ನು ಕಸಿದು ಅವುಗಳನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸಬಿನಾಳ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read