ಕೋಲಾರ: ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ವೃದ್ಧನನ್ನು ಕೊಲೆ ಮಾಡಲಾಗಿದೆ. ದೊಣ್ಣೆಯಿಂದ ಹೊಡೆದು ವೆಂಕಟರಾಮಪ್ಪ(70) ಅವರನ್ನು ಕೊಲೆ ಮಾಡಲಾಗಿದೆ.
ಅನಾರೋಗ್ಯ ಹಿನ್ನೆಲೆ ಮನೆಯಲ್ಲಿಯೇ ಇದ್ದ ವೆಂಕಟರಾಮಪ್ಪ ಅವರನ್ನು ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವೆಂಕಟರಾಮಪ್ಪ ಅವರ ಪತ್ನಿ ಆನಂದಮ್ಮ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಅವರು ಮನೆಗೆ ಬಂದಾಗ ವೆಂಕಟರಾಮಪ್ಪ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
