ಬೆಂಗಳೂರು: ವಿಧಾನಪರಿಷತ್ ಗೆ ನಾಲ್ವರು ಸದಸ್ಯರ ನಾಮ ನಿರ್ದೇಶನಕ್ಕೆ ಹೆಸರು ಅಂತಿಮಗೊಳಿಸಲಾಗಿದೆ. ರಮೇಶ್ ಬಾಬು, ಆರತಿ ಕೃಷ್ಣ, ಶಿವಕುಮಾರ್ ಮತ್ತು ಜಕ್ಕಪ್ಪ ಅವರ ಹೆಸರನ್ನು ಫೈನಲ್ ಮಾಡಲಾಗಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ, ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಮತ್ತು ಹುಬ್ಬಳ್ಳಿ –ಧಾರವಾಡ ಮೂಲದ ಮುಖಂಡರಾದ ಜಕ್ಕಪ್ಪ ಅವರನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಲು ಹೆಸರನ್ನು ಅಂತಿಮಗೊಳಿಸಲಾಗಿದೆ.
ಈ ಹಿಂದೆ ಸಿದ್ಧಪಡಿಸಲಾದ ಪಟ್ಟಿಯಲ್ಲಿ ದಿನೇಶ್ ಅಮಿನ್ ಮಟ್ಟು ಸೇರಿ ಹಲವರ ಹೆಸರುಗಳಿದ್ದು, ಅದರಲ್ಲಿ ಕೆಲ ಬದಲಾವಣೆ ಮಾಡಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.