ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿದ್ದ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯನಿಗೆ ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಚಿನ್ನಯ್ಯನನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶನಿವಾರ ರಾತ್ರಿ ಶಿವಮೊಗ್ಗ ಜೈಲಿಗೆ ಕರೆತರಲಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಚಿನ್ನಯ್ಯನಿಗೆ ಕೈದಿ ನಂಬರ್ ನೀಡಲಾಗಿದೆ. ವಿಚಾರಣಾಧೀನ ಕೈದಿ ಸಂಖ್ಯೆ 1104/25 ಅನ್ನು ಜೈಲಿನ ಅಧಿಕಾರಿ ನೀಡಿದ್ದಾರೆ.
ಆರಂಭದಲ್ಲಿ ದೂರುದಾರನಾಗಿದ್ದ ಚಿನ್ನಯ್ಯ ನ್ಯಾಯಾಂಗ ಬಂಧನದಲ್ಲಿದ್ದು, ಭದ್ರತಾ ಕಾರಣಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.