BREAKING : ಅಕ್ರಮ ಹಣ ವರ್ಗಾವಣೆ ಪ್ರಕರಣ : ಹೀರೋ ಮೋಟೊಕಾರ್ಪ್ ಅಧ್ಯಕ್ಷ ‘ಪವನ್ ಮುಂಜಾಲ್’ಗೆ ಸೇರಿದ 24.95 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ :  ಆಟೋ ಕಂಪನಿ ಹೀರೋ ಮೋಟೊಕಾರ್ಪ್ ನ ಸಿಎಂಡಿ ಮತ್ತು ಅಧ್ಯಕ್ಷ ಪವನ್ ಮುಂಜಾಲ್ ಅವರ ತೊಂದರೆಗಳು ಮತ್ತಷ್ಟು ಹೆಚ್ಚಾಗಿದೆ. ಸುಮಾರು 25 ಕೋಟಿ ಮೌಲ್ಯದ ದೆಹಲಿಯಲ್ಲಿ ಅವರ ಮೂರು ಸ್ಥಿರಾಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ. ಜಾರಿ ನಿರ್ದೇಶನಾಲಯದ ಈ ಕ್ರಮವು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

ಹಿರಾ ಮೋಟೊಕಾರ್ಪ್  ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್ ಕಾಂತ್ ಮುಂಜಾಲ್ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಈಗಾಗಲೇ ನಡೆಸುತ್ತಿದೆ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಇತ್ತೀಚಿನ ಕ್ರಮವು ಅದೇ ತನಿಖೆಯ ಭಾಗವಾಗಿದೆ ಎಂದು ಇಡಿ ಹೇಳಿದೆ. ಇತ್ತೀಚಿನ ಕ್ರಮದಲ್ಲಿ, ಇಡಿ ದೆಹಲಿಯಲ್ಲಿ ಮೂರು ಆಸ್ತಿಗಳನ್ನು ವಶಪಡಿಸಿಕೊಂಡಿದೆ, ಅವುಗಳ  ಒಟ್ಟು ಮೌಲ್ಯ 24.95 ಕೋಟಿ ರೂ. ಇದಕ್ಕೂ ಮೊದಲೇ ಪವನ್ ಮುಂಜಾಲ್ ಅವರ ಕೆಲವು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಅವರ 50 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ವಿದೇಶಿ  ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸಿದ ಆರೋಪ

ಕಂದಾಯ ಗುಪ್ತಚರ ನಿರ್ದೇಶನಾಲಯ ನೀಡಿದ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು  ತನಿಖಾ ಸಂಸ್ಥೆ ತಿಳಿಸಿದೆ. ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿ ಮುಂಜಾಲ್ ಮತ್ತು ಇತರರ ವಿರುದ್ಧ ಡಿಆರ್ಐ ದೂರು ದಾಖಲಿಸಿದೆ. ಮುಂಜಾಲ್ ಮತ್ತು ಇತರರು 54 ಕೋಟಿ ರೂ.ಗಳ ವಿದೇಶಿ ಕರೆನ್ಸಿಯನ್ನು ದೇಶದಿಂದ ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read