ಮಂಡ್ಯ : ಡಿ.ಕೆ ಶಿವಕುಮಾರ್ ಸಿಎಂ ಆಗುವುದು ನಿಶ್ಚಿತ ಎಂದು ಮಂಡ್ಯದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಶ್ರೀ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾತನಾಡಿದ ಅವರು ‘’ಡಿ.ಕೆ ಶಿವಕುಮಾರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಯಾವುದಕ್ಕೂ ಆತುರ ಪಡೋದಿಲ್ಲ. ಚುನಾವಣೆ ಸಂದರ್ಭದಲ್ಲಿ ಅವರು ಬಹಳ ಕಷ್ಟಪಟ್ಟು ಪಕ್ಷ ಮುನ್ನಡೆಸಿದ್ದಾರೆ. ತಾಳ್ಮೆಯಿಂದ ಕಾದು ಬಹಳ ಒಳ್ಳೆಯ ಸ್ಥಾನವನ್ನು ಪಡೆಯುತ್ತಾರೆ’’ ಎಂದರು.
ಪಕ್ಷದಲ್ಲಿರುವ ಹಿರಿಯರಿಗೆ ಸಿಎಂ ಆಗುವ ಹಂಬಲ ಸಹಜವಾಗಿಯೇ ಇರುತ್ತದೆ. ನಾವು ಕೂಡ ಡಿಕೆ ಸಿಎಂ ಆಗಲಿ ಎಂದು ಬಯಸುತ್ತೇವೆ. ಅವರು ತಾಳ್ಮೆಯಿಂದ ಕಾದು ಉನ್ನತ ಹುದ್ದೆ ಪಡೆಯುತ್ತಾರೆ. ಡಿಕೆ ಸಿಎಂ ಆಗಲಿ ಎಂದು ಒಕ್ಕಲಿಗ ಸಮುದಾಯ ಬಯಸಿತ್ತು, ನಾವು ಕೂಡ ಬಯಸುತ್ತೇವೆ ಎಂದಿದ್ದಾರೆ.
You Might Also Like
TAGGED:ನಿಶ್ಚಲನಂದನಾಥಶ್ರೀ ಸ್ವಾಮೀಜಿ