ಬೆಂಗಳೂರು: ಡ್ಯಾನ್ಸ್ ಅಕಾಡೆಮಿಗೆ ನುಗ್ಗಿ ಮಾಲೀಕ ಗಲಾಟೆ ಮಾಡಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡ್ಯಾನ್ಸ್ ಅಕಾಡೆಮಿಯ ಬೋರ್ಡ್ ಕಿತ್ತುಹಾಕಿ ದಾಂದಲೆ ನಡೆಸಿದ ಆರೋಪ ಕೇಳಿ ಬಂದಿದೆ. ಡ್ಯಾನ್ಸ್ ತರಬೇತಿ ವೇಳೆ ಅಕಾಡೆಮಿಗೆ ನುಗ್ಗಿ ಅಸಭ್ಯ ವರ್ತನೆ ತೋರಿಸಿದ್ದಾಗಿ ಮಾಲೀಕ ವಿಜಯಕುಮಾರ್, ಮಂಜು, ನಾರಾಯಣಾಚಾರಿ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಆರ್ಯಾಣಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದ ಉಷಾರಾಣಿ ಎಂಬುವರು ದೂರು ನೀಡಿದ್ದಾರೆ. ಡ್ಯಾನ್ಸ್ ತರಬೇತಿಗಾಗಿ ಕಟ್ಟಡ ಬಾಡಿಗೆ ಪಡೆದು ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಜಯಕುಮಾರ್ ಬಳಿ ಅಕಾಡೆಮಿ ಬಾಡಿಗೆ ಪಡೆದಿದ್ದ ಉಷಾ 6 ಲಕ್ಷ ರೂ. ಮುಂಗಡ ನೀಡಿ, 36 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಬಾಡಿಗೆ ಕರಾರು ಪತ್ರ ಮಾಡಿಕೊಡದೆ ವಿಜಯಕುಮಾರ್ ಸತಾಯಿಸುತ್ತಿದ್ದರು. ಡ್ಯಾನ್ಸ್ ಅಕಾಡೆಮಿ ಓಪನ್ ಆಗಿ ಒಂದೂವರೆ ತಿಂಗಳಲ್ಲೇ ಮಾಲೀಕ ಕಿರಿಕ್ ಮಾಡಿದ್ದಾರೆ. ಡ್ಯಾನ್ಸ್ ಕ್ಲಾಸ್ ನಡೆಯುವಾಗ ಸೌಂಡ್ ಬರ್ತಿದೆ ಎಂದು ಗಲಾಟೆ ಮಾಡಿದ್ದಾರೆ. ಕಟ್ಟಡ ಖಾಲಿ ಮಾಡುವಂತೆ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯಕುಮಾರ್ ಕಡೆಯವರ ವಿರುದ್ಧ ಅಸಭ್ಯ ವರ್ತನೆ ಆರೋಪ ಕೇಳಿ ಬಂದಿದೆ. ಡ್ಯಾನ್ಸ್ ಅಕಾಡೆಮಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.