BREAKING : ಬೆಳಗಾವಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಹೊತ್ತಿ ಉರಿದ ಮನೆ : ಲಕ್ಷಾಂತರ ರೂ. ಹಣ, 4 ಕುರಿ ಸುಟ್ಟು ಭಸ್ಮ

ಬೆಳಗಾವಿ : ಬೆಳಗಾವಿಯಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, 4.5 ಲಕ್ಷ ನಗದು ಸುಟ್ಟು ಭಸ್ಮವಾಗಿ 4 ಕುರಿಗಳು ಸಜೀವ ದಹನವಾಗಿದೆ.

ಬಸವನಕುಡಚಿ ಗ್ರಾಮದ ಅಭಿಷೇಕ್ ಕೌಲಗಿ ಎಂಬುವವರ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯವರು ದೀಪ ಹಚ್ಚಿಟ್ಟು ಹೊರಗೆ ಹೋಗಿದ್ದರು. ಈ ವೇಳೆ ಸಿಲಿಂಡರ್ ಸೋರಿಕೆಯಿಂದ ಸ್ಪೋಟಗೊಂಡು ಮನೆಗೆ ಬೆಂಕಿ ತಗುಲಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಟ್ರಾಕ್ಟರ್ ಖರೀದಿಸಲು ಕೂಡಿಟ್ಟಿದ್ದ 4.5 ಲಕ್ಷ ನಗದು ಬೆಂಕಿಗೆ ಸುಟ್ಟು ಹೋಗಿದೆ ಹಾಗೂ 4 ಕುರಿಗಳು ಸಜೀವ ದಹನವಾಗಿದೆ ಎಂದು ತಿಳಿದು ಬಂದಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read