ವಿಜಯಪುರ: ಭೀಮಾ ತೀರದ ಪ್ರವಾಹ ಬೇಡಿದ ಪ್ರದೇಶಗಳಿಗೆ ಸಚಿವ ಎಂ.ಬಿ. ಪಾಟೀಲ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ದೇವಣಗಾಂವ ಗ್ರಾಮದಲ್ಲಿ ನೆರೆಯಿಂದಾಗಿ ಬಹಳಷ್ಟು ಹಾನಿಯಾಗಿದೆ. ಗ್ರಾಮದ ಸೇತುವೆ ದುರಸ್ತಿ ಮಾಡಲಾಗುವುದು. ಬೆಳೆ ನಾಶದ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಬೆಳೆ ನಾಶದ ಕುರಿತು ಅಧಿಕಾರಿಗಳು ಗಮನಹರಿಸಲಿದ್ದಾರೆ. ಪ್ರವಾಹದಿಂದ 1.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪ್ರವಾಹದ ಬಗ್ಗೆ ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮಕ್ಕೆ ಭೇಟಿನೀಡಿ, ಭೀಮಾನದಿ ಪ್ರವಾಹದಿಂದ ಹಾನಿ ಹಾಗೂ ಸುರಕ್ಷಿತ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕಾಳಜಿ ಕೇಂದ್ರಕ್ಕೆ ತೆರಳಿ ನಿರಾಶ್ರಿತರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಇನ್ನಷ್ಟು ನೆರವು ಮತ್ತು ಸುಧಾರಿತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಕುಮಸಗಿಯಲ್ಲಿ ಭೀಮಾನದಿ ಪ್ರವಾಹದಿಂದ ಹತ್ತಿ, ಈರುಳ್ಳಿ, ಕಬ್ಬು ಬೆಳೆಹಾನಿಯಾಗಿದ್ದು, ಸೂಕ್ತ ಪರಿಹಾರದ ಭರವಸೆ ನೀಡಲಾಗಿದೆ. ಭೀಮಾನದಿಯ ಪ್ರವಾಹಕ್ಕೆ ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮದಲ್ಲಿ ಹತ್ತಿ, ಈರುಳ್ಳಿ, ಕಬ್ಬು, ಮುಂತಾದ ಬೆಳೆಗಳ ಹಾನಿಯಾಗಿದ್ದು, ರೈತರ ಸಂಕಷ್ಟ ಆಲಿಸಿ, ಸೂಕ್ತ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಸಿಂದಗಿ ಶಾಸಕ ಅಶೋಕ್ ಮುನಗೂಳಿ, ಜಿಲ್ಲಾಧಿಕಾರಿ ಡಾ. ಆನಂದ್, ಜಿಪಂ CEO ರಿಷಿ ಆನಂದ್ ಹಾಗೂ ಸಂಬಂಧಿತ ಅಧಿಕಾರಿಗಳು ಜೊತೆಗಿದ್ದರು.
#ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮಕ್ಕೆ ಭೇಟಿನೀಡಿ, ಭೀಮಾನದಿ ಪ್ರವಾಹದಿಂದ ಹಾನಿಯಾಗಿರುವುದು ಹಾಗೂ ಸುರಕ್ಷಿತ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕಾಳಜಿಕೇಂದ್ರಕ್ಕೆ ತೆರಳಿ, ನಿರಾಶ್ರಿತರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಇನ್ನಷ್ಟು ನೆರವು ಮತ್ತು ಸುಧಾರಿತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ… pic.twitter.com/Jxq8rCDZkT
— M B Patil (@MBPatil) September 28, 2025