ಹಾವೇರಿ: ಪತಿಯ ಅಂತ್ಯಕ್ರಿಯ ವೇಳೆ ಪತ್ನಿಯೂ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೊತೆಯಾಗಿ ಜೀವನ ಸಾಗಿಸಿದ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ.
ವೀರಬಸಪ್ಪ ಗೋಣಿಗೇರ(70), ಬಸಮ್ಮ(60) ಮೃತಪಟ್ಟ ದಂಪತಿ. ಭಾನುವಾರ ಬೆಳಿಗ್ಗೆ ವೀರಬಸಪ್ಪ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಗೆ ಹೋದ ಬಸಮ್ಮ ಅವರು ಲೋ ಬಿಪಿಯಿಂದಾಗಿ ಮೃತಪಟ್ಟಿದ್ದಾರೆ. ಪತಿ, ಪತ್ನಿ ಅಂತ್ಯಕ್ರಿಯೆ ಒಂದೇ ಚಿತೆಯಲ್ಲಿ ನೆರವೇರಿಸಲಾಗಿದೆ. ಒಂದೇ ದಿನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ಮನೆಯವರು, ಗ್ರಾಮಸ್ಥರು, ಸಂಬಂಧಿಕರು ಕಂಬನಿ ಮಿಡಿದಿದ್ದಾರೆ.