BREAKING : ಕರ್ನಾಟಕದಲ್ಲಿ ‘ಕಾಟನ್ ಕ್ಯಾಂಡಿ’ ಬ್ಯಾನ್ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ   ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಆರೋಗ್ಯ ದೃಷ್ಟಿ ಹಿನ್ನೆಲೆ  ಕಾಟನ್ ಕ್ಯಾಂಡಿ ಯಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಬ್ಯಾನ್ ಮಾಡಲಾಗಿದೆ ಎಂದಿದ್ದಾರೆ. ಆಹಾರ ಸುರಕ್ಷತೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಮಿಶ್ರಣ ಮಾಡುವ ಹಿನ್ನೆಲೆಯಲ್ಲಿ ಈ ಹಿಂದೆ ವಿವಿಧ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ನೀಡಲಾಗಿತ್ತು. ಹತ್ತಾರು ಮಾದರಿಯ ಕಾಟನ್ ಕ್ಯಾಂಡಿ ಅಸುರಕ್ಷಿತ ಎನ್ನುವುದು ಸಾಬೀತಾಗಿದೆ. ಆಹಾರ ಸುರಕ್ಷತೆ ಕಾಯ್ದೆಯಡಿ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್ ಹಾಗೂ ರಾಸಾಯನಿಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಬಾಂಬೆ ಮಿಠಾಯಿ ಮಕ್ಕಳ ಅಚ್ಚುಮೆಚ್ಚಿನ ತಿನಿಸಾಗಿದ್ದು, ಜಾತ್ರೆ ಸೇರಿದಂತೆ ಹಲವು ಕಡೆ ಇದನ್ನು ಮಾರಾಟ ಮಾಡಲಾಗುತ್ತದೆ. ಉದ್ದನೆಯ ಕೋಲಿಗೆ ಬಾಂಬೆ ಮಿಠಾಯಿಯನ್ನು ಸೆಕ್ಕಿಸಿಕೊಂಡು ಬೀದಿ ಬೀದಿಗಳಲ್ಲಿ ಮಾರಾಟ ಮಾಡುವುದನ್ನ ನಾವು ನೋಡುತ್ತಿರುತ್ತೇವೆ. ಬಾಂಬೆ ಮಿಠಾಯಿಯಲ್ಲಿ ಹಾನಿಕಾರಕ ಅಂಶ ಇರೋದ್ರಿಂದ ಕಾಟನ್ ಕ್ಯಾಂಡಿ ಮಾರಾಟ ಹಾಗೂ ತಯಾರಿಕೆ ನಿಷೇಧಗೊಳಿಸಿ ಆದೇಶ ಹೊರಡಿಸಲಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read