ನವದೆಹಲಿ: ಖದೀಮನೋರ್ವ ಕಾಂಗ್ರೆಸ್ ಸಂಸದೆ ಆರ್. ಸುಧಾ ಅವರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರವನ್ನು ದೋಚಿದ ಘಟನೆ ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಸೋಮವಾರ ಬೆಳಗೆ ನಡೆದಿದೆ.
ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಗಂಭೀರ ಭದ್ರತಾ ಕಳವಳವನ್ನು ಹುಟ್ಟುಹಾಕಿದೆ. ತಮಿಳುನಾಡಿನ ಮೈಲಾಡುತುರೈ ಸಂಸದೆ ಅವರ ಬಳಿ ಇದ್ದ ನಾಲ್ಕು ಪವನ್ಗಳಿಗಿಂತ ಹೆಚ್ಚು ಮೌಲ್ಯದ ಚಿನ್ನದ ಸರವನ್ನು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಬಂದು ಕಸಿದುಕೊಂಡು ಹೋಗಿದ್ದಾನೆ ಎಂದು ಹೇಳಿದರು..
ಈ ಗಲಾಟೆಯಲ್ಲಿ ಸುಧಾ ಅವರ ಕುತ್ತಿಗೆಗೆ ಗಾಯಗಳಾಗಿದ್ದು, ಅವರ ಚೂಡಿದಾರ್ ಹರಿದು ಹೋಗಿತ್ತು. ಹಲ್ಲೆ ನಡೆಸುವ ಮೊದಲು ದಾಳಿಕೋರ ನಿಧಾನವಾಗಿ ಚಲಿಸುತ್ತಿದ್ದಂತೆ ಕಂಡುಬಂದಿದ್ದು, ಅವನ ಉದ್ದೇಶಗಳ ಬಗ್ಗೆ ತನಗೆ ಯಾವುದೇ ಅನುಮಾನವಿರಲಿಲ್ಲ ಎಂದು ಅವರು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ, ಸುಧಾ ಈ ಘಟನೆಯನ್ನು ದೆಹಲಿಯ ಅತ್ಯಂತ ಸುರಕ್ಷಿತ ವಲಯಗಳಲ್ಲಿ ಒಂದಾದ ಮಹಿಳೆ ಮತ್ತು ಸಂಸತ್ ಸದಸ್ಯರ ಮೇಲೆ ನಡೆದ “ದೊಡ್ಡ ದಾಳಿ” ಎಂದು ಬಣ್ಣಿಸಿದ್ದಾರೆ. ರಾಯಭಾರ ಕಚೇರಿಗಳು ಮತ್ತು ಸಂರಕ್ಷಿತ ಸಂಸ್ಥೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಇಂತಹ ಅಪರಾಧಗಳು ನಡೆದರೆ ನಾಗರಿಕರು ಹೇಗೆ ಸುರಕ್ಷಿತವಾಗಿರುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.