ಬೆಂಗಳೂರು: ಆಗಸ್ಟ್ 26ರಂದು ಗೌರಿ ಹಬ್ಬ, ಆಗಸ್ಟ್ 27ರಂದು ಗಣೇಶ ಚತುರ್ಥಿ ಆಚರಿಸಲಾಗುವುದು. ನಾಡಿನಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ. ಪರಿಸರಕ್ಕೆ ಹಾನಿಕರವಾದ ರಾಸಾಯನಿಕ ಗಣೇಶ ಮೂರ್ತಿ ಬದಲು ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶನನ್ನು ಪೂಜಿಸುವಂತೆ ತಿಳಿಸಿದ್ದಾರೆ.
“ನಾಡಬಂಧುಗಳಿಗೆ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಜಲಚರಗಳಿಗೆ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಯುಕ್ತ ಗಣೇಶ ಮೂರ್ತಿಯ ಬದಲಿಗೆ ಮಣ್ಣಿನಿಂದಷ್ಟೇ ಮಾಡಿದ ಪರಿಸರಸ್ನೇಹಿ ಗಣೇಶನನ್ನು ಪೂಜಿಸೋಣ.
ಹಬ್ಬವನ್ನು ಸಂಭ್ರಮ – ಸಡಗರದೊಂದಿಗೆ ಆಚರಿಸುವ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ.
ವಿಘ್ನನಿವಾರಕನಾದ ಗಣೇಶನು ನಿಮ್ಮೆಲ್ಲಾ ಕಷ್ಟಗಳನ್ನು ಕಳೆದು ಸುಖ – ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ನಾಡಬಂಧುಗಳಿಗೆ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
— Siddaramaiah (@siddaramaiah) August 25, 2025
ಜಲಚರಗಳಿಗೆ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಯುಕ್ತ ಗಣೇಶ ಮೂರ್ತಿಯ ಬದಲಿಗೆ ಮಣ್ಣಿನಿಂದಷ್ಟೇ ಮಾಡಿದ ಪರಿಸರಸ್ನೇಹಿ ಗಣೇಶನನ್ನು ಪೂಜಿಸೋಣ.
ಹಬ್ಬವನ್ನು ಸಂಭ್ರಮ – ಸಡಗರದೊಂದಿಗೆ ಆಚರಿಸುವ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ.
ವಿಘ್ನನಿವಾರಕನಾದ ಗಣೇಶನು ನಿಮ್ಮೆಲ್ಲಾ… pic.twitter.com/BBCYzd1fS6