ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದ ಮಹೇಶ್ ತಿಮರೋಡಿ ವಿರುದ್ಧ ಕೇಸ್ ದಾಖಲಿಸಲು ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವನೇ ಸಿದ್ದರಾಮಯ್ಯ ಅವರು ಕೊಲೆಗಾರ ಎಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧವೇ 24 ಕೊಲೆ ಆರೋಪ ಮಾಡಿದ್ದಾರೆ . ಇದಕ್ಕೂ ಎಸ್ ಐ ಟಿ ರಚನೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಅಶೋಕ್ ಹೇಳಿಕೆ ಬೆನ್ನಲ್ಲೇ ಮಹೇಶ್ ತಿಮರೋಡಿ’ ವಿರುದ್ಧ ‘FIR’ ದಾಖಲಿಸಲು ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.