BREAKING : ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ ; ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ

ಬೆಂಗಳೂರು : ವಕೀಲೆ ಚೈತ್ರಾಗೌಡ ಕೇಸ್ ಸಿಸಿಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ವಕೀಲೆ ಚೈತ್ರಾಗೌಡ ಮರಣೋತ್ತರ ಪರೀಕ್ಷೆ ರಿಪೋರ್ಟ್ ಇನ್ನೂ ಕೂಡ ಬಂದಿಲ್ಲ, ಬಂದ ಕೂಡಲೇ ಅವರ ಸಾವಿನ ಬಗ್ಗೆ ನಿಖರ ಮಾಹಿತಿಯನ್ನು ಸಿಸಿಬಿ ಪಡೆಯಲಿದೆ.

ಕೆಎಎಸ್ ಅಧಿಕಾರಿ ಶಿವಕುಮಾರ್ ಪತ್ನಿ, ವಕೀಲೆ ಚೈತ್ರಾಗೌಡ ಅವರದ್ದು ಕೊಲೆಯಲ್ಲ ಆತ್ಮಹತ್ಯೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಚೈತ್ರಾಗೌಡ ಆತ್ಮಹತ್ಯೆ ಬಳಿಕ ದೊರೆತಿದ್ದ ಡೆತ್ ನೋಟ್ ಕೂಡ ಸಾವಿಗೂ ಮುನ್ನ ಚೈತ್ರಾ ಅವರೇ ಬರೆದಿದ್ದರು ಎಂಬುದು ದೃಢವಾಗಿದೆ. ವಕೀಲೆ ಚೈತ್ರಾಗೌಡ ಮನೆಯಲ್ಲಿ ನೇಣುಬಿಗಿದ ರೀತಿಯಲ್ಲಿ ಮೇ 11ರಂದು ಶವವಾಗಿ ಪತ್ತೆಯಾಗಿದ್ದರು. ಈ ವೇಳೆ ಚೈತ್ರಾಗೌಡ ಮೂರು ತಿಂಗಳ ಹಿಂದೆ ಬರೆದಿದ್ದ ಡೆತ್ ನೋಟ್ ಒಂದು ಪತ್ತೆಯಾಗಿತ್ತು. ಅದರಲ್ಲಿ ತಾನು ಖಿನ್ನತೆಯಿಂದ ಬಳಲುತ್ತಿದ್ದು, ಅದರಿಂದ ಹೊರಬರಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದರು .   ಅದೇನೆ ಇರಲಿ ತನಿಖೆಯಿಂದಷ್ಟೇ ಸತ್ಯಾನುಸತ್ಯತೆ ಹೊರಬರಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read