BREAKING : ಮಹಿಷಾ ದಸರಾ ತಡೆಯಲು ಅ.14 ರಂದು `ಚಾಮುಂಡಿ ಬೆಟ್ಟ ಚಲೋ’: ಸಂಸದ ಪ್ರತಾಪ್ ಸಿಂಹ

Permission sought for Mahisha Dasara

ಮೈಸೂರು : ಮಹಿಷಾ ದಸರಾ ತಡೆಯಲು ಅಕ್ಟೋಬರ್ 14 ರಂದು ಚಾಮುಂಡಿ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015-16 ರಲ್ಲಿ ಅನಾಚಾರ ಮಹಿಷಾ ದಸರಾ ಆಯೋಜಸಿಲಾಗಿತ್ತು. ದೆವ್ವ ಯಾವಾಗ ದೇವಾರಾಯಿತೋ ಗೊತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಸಿಎಂ ಆದ ಮೇಲೆ ಮಹಿಷಾ ದಸರಾಗೆ ಬ್ರೇಕ್ ಹಾಕಲಾಗಿತ್ತು. ಆಸ್ತಿಕರು, ನಂಬಿಕೆ ಇಟ್ಟವರಿಗೆ ನೋವಾಗುತ್ತದೆ. ನಾಲ್ಕು ವರ್ಷ ಮಹಿಷಾ ದಸರಾವನ್ನು ತಡೆದಿದ್ದೇವೆ ಎಂದು ಹೇಳಿದ್ದಾರ.ೆ

ಮೈಸೂರಿನಲ್ಲಿ ಮತ್ತೆ ಮಹಿಷಾ ದಸರಾ ಆಚರಣೆ  ಮಾಡುತ್ತಿದ್ದಾರೆ. ಅಕ್ಟೋಬರ್ 14 ರಂದು ಚಾಮುಂಡಿ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.  ಮಹಿಷಾ ದಸರಾ ಆಚರಣೆ ತಡೆದು ಚಾಮುಂಡಿಗೆ ಪೂಜೆ ಸಲ್ಲಿಸುತ್ತೇವೆ. ಡಿಸಿ ಹಾಗೂ ಮೈಸೂರು ಪೊಲೀಸ್ ಆಯುಕ್ತರಿಗೂ ಈ ಬಗ್ಗೆ ಮನವಿ ಮಾಡುತ್ತೇವೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read