ಬೆಂಗಳೂರು : ಕಾವೇರಿ 5 ನೇ ಹಂತದ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಈ ಮೂಲಕ ಮುಂದಿನ 10 ವರ್ಷ ಬೆಂಗಳೂರಿಗರಿಗೆ ಕುಡಿಯುವ ನೀರಿನ ಚಿಂತೆ ಇರೋದಿಲ್ಲ.
ಹೌದು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಸಮೃದ್ಧ ನೀರು ಒದಗಿಸಲು ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಇಂದು ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಚಾಲನೆ ನೀಡಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು.
ಹಲವಾರು ವಿಶೇಷತೆಗಳನ್ನು ಹೊಂದಿರುವ, ಸುಧಾರಿತ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ನಿರ್ಮಿಸಲಾಗಿರುವ ಈ ಯೋಜನೆಯು ಜಲಸುರಕ್ಷತೆಯ ನಿಟ್ಟಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಲಿದೆ. ಮನೆಮನೆಗೂ ಕಾವೇರಿ ನೀರನ್ನು ಒದಗಿಸುವ ಯೋಜನೆಯು ಸಾಕಾರಗೊಳ್ಳಲು ಅಹರ್ನಿಶಿಯಾಗಿ ದುಡಿದ ಬೆಂಗಳೂರು ಜಲಮಂಡಳಿಯ ಎಲ್ಲಾ ಅಧಿಕಾರಿಗಳಿಗೂ ಹಾಗೂ ಕಾರ್ಮಿಕ ವರ್ಗಕ್ಕೂ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಡಿಸಿಎಂ ಡಿಕೆಶಿ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರನ್ನು ಪೂರೈಸುವ ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾದ ಕಾವೇರಿ 5ನೇ ಹಂತದ ಯೋಜನೆಯ ಉದ್ಘಾಟನೆಗೂ ಮುನ್ನ ಶುಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿಸಿ, ಗಂಗಾ ಪೂಜೆ ಸಲ್ಲಿಸಿ, ಸಪ್ತ ನದಿಗಳ ನೀರನ್ನು ತಂದು ಪೂಜೆ ನೆರವೇರಿಸಲಾಯಿತು. #ಮನೆಮನೆಗೂಕಾವೇರಿನೀರು… pic.twitter.com/AlPOXH49Ma
— DK Shivakumar (@DKShivakumar) October 16, 2024