ಮೈಸೂರು: ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ಬಳಿ ನಾಲೆಗೆ ಬಿದ್ದ ಬಾಲಕನ ರಕ್ಷಣೆಗೆ ಹೋಗಿದ್ದ ಸಹೋದರರು ನೀರು ಪಾಲಾಗಿದ್ದಾರೆ.
ನಂದನ್(25), ರಾಕೇಶ್(20) ಮೃತ ಸಹೋದರರು. ಬಗಡಗಲಹುಂಡಿ ಗ್ರಾಮದ ರಮೇಶ್ ಪುತ್ರರಾದ ನಂದನ್ ಮತ್ತು ರಾಕೇಶ್ ಅವರು ವರುಣ ನಾಲೆಯಲ್ಲಿ ನೀರಿನಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆಗೆ ಹೋದಾಗ ಘಟನೆ ನಡೆದಿದೆ.
ನಾಲೆಯಲ್ಲಿ ಕೊಂಬೆ ಹಿಡಿದುಕೊಂಡಿದ್ದ ಬಾಲಕನ ರಕ್ಷಣೆಗೆ ಇಬ್ಬರು ಧಾವಿಸಿದ್ದಾರೆ. ಬಾಲಕನ ರಕ್ಷಣೆಗಾಗಿ ಇಬ್ಬರೂ ಸಹೋದರರು ನಾಲೆಗೆ ಇಳಿದಿದ್ದಾರೆ. ಈ ವೇಳೆ ನಾಲೆಯಲ್ಲಿ ಕೊಚ್ಚಿ ಹೋಗಿ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ. ಮರದ ಕೊಂಬೆ ನೆರವಿನಿಂದ ಬಾಲಕ ಪಾರಾಗಿದ್ದಾನೆ. ವರುಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಂದನ್ 15 ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.
