ಬಾಲಿವುಡ್ ಖ್ಯಾತ ನಟ ಆಸಿಫ್ ಖಾನ್ ಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
‘ಪಾತಾಳ ಲೋಕ’ ಮತ್ತು ‘ಪಂಚಾಯತ್’ ಖ್ಯಾತಿಯ ನಟ ಆಸಿಫ್ ಖಾನ್ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂಲಗಳ ಪ್ರಕಾರ, ಅವರು ಸದ್ಯ ಚೆನ್ನಾಗಿದ್ದಾರೆ ಮತ್ತು ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಆಸಿಫ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಆಸ್ಪತ್ರೆಯಿಂದ ಫೋಟೋ ಹಂಚಿಕೊಂಡಿದ್ದಾರೆ ಮತ್ತು “ಕಳೆದ 36 ಗಂಟೆಗಳ ಕಾಲ ಇದನ್ನು ನೋಡಿದ ನಂತರ ಜೀವನವು ಬಹಳ ಚಿಕ್ಕದಾಗಿದೆ ಎಂದು ಅರಿತುಕೊಂಡಿದ್ದೇನೆ, ಒಂದು ದಿನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಎಲ್ಲವೂ ಒಂದು ಕ್ಷಣದಲ್ಲಿ ಬದಲಾಗಬಹುದು, ನಿಮ್ಮಲ್ಲಿರುವ ಎಲ್ಲದಕ್ಕೂ ಮತ್ತು ನೀವು ಏನೆಂಬುದಕ್ಕೂ ಕೃತಜ್ಞರಾಗಿರಿ. ನಿಮಗೆ ಯಾರು ಹೆಚ್ಚು ಮುಖ್ಯ ಎಂಬುದನ್ನು ನೆನಪಿಡಿ ಮತ್ತು ಅವರನ್ನು ಯಾವಾಗಲೂ ಪ್ರೀತಿಸಿ. ಜೀವನವು ಒಂದು ಉಡುಗೊರೆ ಮತ್ತು ನಾವು ಧನ್ಯರು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
