ನವದೆಹಲಿ: ಸೂಪರ್ ಹಿಟ್ ಸರಣಿ ಫ್ಯಾಮಿಲಿ ಮ್ಯಾನ್ 3 ನಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾದ ನಟ ರೋಹಿತ್ ಬಸ್ಫೋರ್ ಭಾನುವಾರ ಸಂಜೆ ಅಸ್ಸಾಂನ ಗರ್ಭಂಗಾ ಅರಣ್ಯದ ಜಲಪಾತದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಬಾಸ್ಫೋರ್ ಕೆಲವು ತಿಂಗಳ ಹಿಂದೆ ಮುಂಬೈನಿಂದ ಗುವಾಹಟಿಗೆ ಮರಳಿದರು. ಭಾನುವಾರ ಮಧ್ಯಾಹ್ನ 12.30 ರ ಸುಮಾರಿಗೆ ಸ್ನೇಹಿತರೊಂದಿಗೆ ಒಂದು ದಿನದ ವಿಹಾರಕ್ಕಾಗಿ ಮನೆಯಿಂದ ಹೊರಟರು ಎಂದು ಅವರ ಕುಟುಂಬ ಹೇಳಿಕೊಂಡಿದೆ. ಕುಟುಂಬ ಸದಸ್ಯರು ಸಂಜೆ ಅವರೊಂದಿಗಿನ ಸಂಪರ್ಕವನ್ನು ಕಳೆದುಕೊಂಡ ನಂತರ ಆತಂಕ ಶುರುವಾಗಿತ್ತು.
ಕೆಲವು ಗಂಟೆಗಳ ನಂತರ, ಸ್ನೇಹಿತರೊಬ್ಬರು ಅವರ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದರು. ರೋಹಿತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಇದೀಗ ರೋಹಿತ್ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ನಟ ಇತ್ತೀಚೆಗೆ ಪಾರ್ಕಿಂಗ್ ವಿವಾದದಲ್ಲಿ ಭಾಗಿಯಾಗಿದ್ದರು, ಈ ಸಮಯದಲ್ಲಿ ರಂಜಿತ್ ಬಸ್ಫೋರ್, ಅಶೋಕ್ ಬಸ್ಫೋರ್ ಮತ್ತು ಧರಂ ಬಸ್ಫೋರ್ ಎಂಬ ಮೂವರು ವ್ಯಕ್ತಿಗಳು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನಟನ ಸಂಬಂಧಿಕರು ಜಿಮ್ ಮಾಲೀಕ ಅಮರ್ದೀಪ್ ಎಂಬಾತನನ್ನು ಹೆಸರಿಸಿದ್ದಾರೆ, ಅವರು ಬಾಸ್ಫೋರ್ ಅವರನ್ನು ವಿಹಾರಕ್ಕೆ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.
ನಟನ ದೇಹದ ಮೇಲೆ ಹಲವಾರು ಗಾಯದ ಗುರುತುಗಳಿವೆ ಎಂದು ಪೊಲೀಸರು ದೃಢಪಡಿಸಿದ್ದಾರೆ. “ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಮವಾರ ಶವಪರೀಕ್ಷೆ ನಡೆಸಲಾಯಿತು. ಅವರ ತಲೆ, ಮುಖ ಮತ್ತು ಇತರ ಭಾಗಗಳಲ್ಲಿ ಗಾಯಗಳು ಸೇರಿದಂತೆ ದೇಹದ ಮೇಲೆ ಅನೇಕ ಗಾಯಗಳು ಪತ್ತೆಯಾಗಿವೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ, ಆದರೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.