ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆ ಕೊಲೆ ಮಾಡಿ ಶವವನ್ನು ಕಸದ ಲಾರಿಗೆ ಬಿಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಹುಳಿಮಾವು ನಿವಾಸಿ ಆಶಾ ಕೊಲೆಯಾಗಿರುವ ಮಹಿಳೆ ಎಂದು ಗುರುತಿಸಲಾಗಿದೆ. ಗಂಡನೇ ಪತ್ನಿ ಆಶಾಡನ್ನು ಕೊಲೆ ಮಾಡಿ ಶವ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಹುಳಿಮಾವಿನಲ್ಲಿಯೇ ಪತ್ನಿ ಆಶಾಳನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದ್ವಿಚಕ್ರ ವಾಹನದಲ್ಲಿ ಮೃತದೇಹದ ತಂದು ಕಸದ ಲಾರಿಗೆ ಬಿಸಾಕಿದ್ದಾನೆ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.