ಮಂಗಳೂರು: ಲವ್, ಸೆಕ್ಸ್, ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗನ ರಕ್ಷಣೆಗೆ ನಿಂತಿದ್ದ ಬಿಜೆಪಿ ಮುಖಂಡನನ್ನು ಬಂಧಿಸಲಾಗಿದೆ.
ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಮಗ ಕೃಷ್ಣ ಜೆ. ರಾವ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆ ಪೊಲೀಸರು ಜಗನ್ನಿವಾಸ ರಾವ್ ಅವರನ್ನು ಬಂಧಿಸಿದ್ದಾರೆ. ಒಂದು ವಾರದಿಂದ ಕೃಷ್ಣ ಜೆ. ರಾವ್ ತಲೆಮರೆಸಿಕೊಂಡಿದ್ದ. ಮಗ ತಪ್ಪಿಸಿಕೊಳ್ಳಲು ಜಗನ್ನಿವಾಸ ರಾವ್ ಸಹಕರಿಸಿದ್ದ. ಸಹಪಾಠಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೃಷ್ಣ ಕೈಕೊಟ್ಟಿದ್ದ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು.