ಬೆಂಗಳೂರು : 18 ಶಾಸಕರ ಅಮಾನತು ಖಂಡಿಸಿ ‘ಬಿಬಿಎಂಪಿ ಬಜೆಟ್ ಪೂರ್ವಭಾವಿ ಸಭೆ’ಯನ್ನು ಬಿಜೆಪಿ ಬಹಿಷ್ಕರಿಸಿದೆ.
ಪಕ್ಷದ ನಾಯಕರ ಸೂಚನೆ ಮೇರೆಗೆ ಬಿಬಿಎಂಪಿ ಬಜೆಟ್ ಪೂರ್ವಭಾವಿ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದ್ದು, ಸಭೆಯಿಂದ ಬಿಜೆಪಿ ಶಾಸಕರು ಹೊರ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದರು. ವಿಧಾನಸಭೆಯ ಕಲಾಪದ ವೇಳೆ ಬಿಜೆಪಿ ಶಾಸಕರು ವಿಧೇಯಕಗಳನ್ನು ಹರಿದು ಸ್ಪೀಕರ್ ಮೇಲೆ ಎಸೆದು ಗಲಾಟೆ ಎಬ್ಬಿಇಸಿದ್ದರು. ಅಲ್ಲದೇ ಸಿಡಿ ಪ್ರದರ್ಶನ ಮಾಡಿ ಗದ್ದಲ-ಕೋಲಾಹಲವೆಬ್ಬಿಸಿದ್ದರು. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ 6 ತಿಂಗಳ ಕಾಲ ಬಿಜೆಪಿ 18 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದರು.