BREAKING : ‘ಮುಡಾ’ದಿಂದ 50:50 ಸೈಟ್ ಪಡೆದವರಿಗೆ ಬಿಗ್ ಶಾಕ್ : ಜಪ್ತಿಗೆ ಸಭೆಯಲ್ಲಿ ಒಮ್ಮತದ ನಿರ್ಧಾರ.!

ಬೆಂಗಳೂರು : ಮುಡಾದಿಂದ 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಬಿಗ್ ಶಾಕ್ ಎದುರಾಗಿದ್ದು, ಜಪ್ತಿಗೆ ಎಲ್ಲಾ ಸದಸ್ಯರು ಒಮ್ಮತದ ಒಪ್ಪಿಗೆ ಸೂಚಿಸಿದರು.

ಇಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಮುಡಾ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ನ್ಯಾ. ಪಿಎನ್ ದೇಸಾಯಿ ವರದಿಯ ನಂತರ 50:50 ಅನುಪಾತದಲ್ಲಿ ಸೈಟ್ ಪಡೆದವರಿಂದ ಜಪ್ತಿ ಮಾಡುವ ನಿರ್ಧಾರಕ್ಕೆ ಮುಡಾದ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿನ ಬದಲಿ ನಿವೇಶನ ಹಂಚಿಕೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಸಾಕಷ್ಟು ಬೆಳವಣಿಗೆಗಳು ಆಗಿರುವ ನಡುವೆ ಮುಡಾದ ಮೊದಲ ಸಾಮಾನ್ಯ ಸಭೆ ಗುರುವಾರ ನಡೆದಿದೆ. ಮುಡಾದಲ್ಲಿ 50:50 ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಬಹುಕೋಟಿ ಹಗರಣ ಬೆಳಕಿಗೆ ಬಂದನಂತರ ನಡೆಯುತ್ತಿರುವ ಮೊದಲ ಮುಡಾದ ಸಾಮಾನ್ಯ ಸಭೆ ಇದಾಗಿದೆ. ಮುಡಾ ಸಭೆಯಲ್ಲಿ ಸದಸ್ಯರಿಗೆ ಭರ್ಜರಿ ‘ಬಾಡೂಟ ‘ ಹಾಕಿಸಲಾಗಿದೆ. ಮುಡಾ ಸಭೆಗೆ ಬಂದಿದ್ದ ಸದಸ್ಯರಿಗೆ ಬಗೆ ಬಗೆಯಾದ ನಾನ್ ವೆಜ್ ಊಟ ಹಾಕಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read