ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಸಚಿವ ಸ್ಥಾನಕ್ಕೆಕಿರೋರಿ ಲಾಲ್ ಮೀನಾ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ಅವರು ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ರಾಜಸ್ಥಾನದ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಯಂತೆ ತಮ್ಮ ತವರು ದೌಸಾ ಸೇರಿದಂತೆ ತಮ್ಮ ಪಕ್ಷವು ಸ್ಥಾನಗಳನ್ನು ಕಳೆದುಕೊಂಡ ನಂತರ 72 ವರ್ಷದ ನಾಯಕ ರಾಜೀನಾಮೆ ನೀಡಿದ್ದಾರೆ. ಮೀನಾ ಅವರು ರಾಮಚರಿತಮಾನಸದಿಂದ ಒಂದು ಪದ್ಯವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ‘ರಘುಕುಲ್ ರೀತಿ ಸದಾ ಚಾಲಿ ಆಯಿ, ಪ್ರಾಣ್ ಜಾಯ್ ಪರ್ ಬಚನ್ ನಾ ಜಾಯ್’ ಎಂದು ಬರೆದಿದ್ದಾರೆ.
https://twitter.com/DrKirodilalBJP/status/1808731466156707905?ref_src=twsrc%5Etfw%7Ctwcamp%5Etweetembed%7Ctwterm%5E1808731466156707905%7Ctwgr%5E3833b46dd4ae275778481cfccbc68193dc77008d%7Ctwcon%5Es1_&ref_url=https%3A%2F%2Fnews24online.com%2Findia%2Fkirodi-lal-meena-fulfills-election-vow-resigns-from-rajasthan-ministerial-role%2F300448%2F