ಕೊಪ್ಪಳ: ಜಮೀನಿನಲ್ಲಿ ಕೆಲಸ ಮಾಡುವಾಗ ರೈತನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾವಣಕಿ ಗ್ರಾಮದಲ್ಲಿ ನಡೆದಿದೆ.
ರೈತ ನಾಗಪ್ಪ ಬೆಂಚಳ್ಳಿ ಅವರ ಮೇಲೆ ಕರಡಿ ದಾಳಿ ಮಾಡಿದೆ. ರಾವಣಕಿ ಗ್ರಾಮದ ಹೊರ ವಲಯದಲ್ಲಿ ಜಮೀನಿನಲ್ಲಿ ನಾಗಪ್ಪ ಕೆಲಸ ಮಾಡುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಅವರ ಕೂಗಾಟ ಕೇಳಿದ ಸ್ಥಳೀಯರು ರಕ್ಷಣೆಗಾಗಿ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಗಾಯಾಳು ನಾಗಪ್ಪ ಅವರನ್ನು ರಕ್ಷಿಸಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.