BREAKING : ಮೈಸೂರಲ್ಲಿ ಸಿಎಂ ಸಿದ್ಧರಾಮಯ್ಯಗೆ ‘ಘೇರಾವ್’ ಹಾಕಲು ಯತ್ನ : ರೈತರು ಪೊಲೀಸ್ ವಶಕ್ಕೆ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಳುವ ಹಿನ್ನೆಲೆ ರೈತರು ಸಿಎಂ ಗೆ ಘೇರಾವ್ ಹಾಕಲು ಸಿದ್ದತೆ ನಡೆಸಿದ್ದಾರೆ.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿದ್ದ ಟಿ.ನರಸೀಪುರದ ಅನೇಕ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿದ್ಧರಾಮಯ್ಯ ಮೈಸೂರಿಗೆ ಆಗಮಿಸುತ್ತಿದ್ದಂತೆ ಅವರಿಗೆ ಘೆರಾವ್ ಹಾಕೋದಕ್ಕೆ ರೈತರು ಮುಂದಾಗಿದ್ದರು ಎನ್ನಲಾಗಿದೆ.

ಪೊಲೀಸರ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಹಿಟ್ಲರ್ ಸರ್ಕಾರವೋ ಇಲ್ಲ ಜನ ಸಾಮಾನ್ಯರ ಸರ್ಕಾರವೋ ? ವಿವಿಧ ಬೇಡಿಕೆ ಈಡೇರಿಸುವಂತೆ ನಾವು ಹಲವು ತಿಂಗಳಿಂದ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದರು. ಸಿಎಂ ಬರುತ್ತಾರೆ ಎಂದು ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಸಿದ್ದರಾಮಯ್ಯನವರು ರೈತರನ್ನ ಕರೆಸಿ ಮಾತನಾಡಬಹುದಿತ್ತು, ಅದನ್ನ ಬಿಟ್ಟು ರೈತರನ್ನು ಬಂಧಿಸಿರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read