BREAKING : ಅರಸು ಚಿತ್ರ ಖ್ಯಾತಿಯ ನಟಿ ‘ಮೀರಾ ಜಾಸ್ಮಿನ್’ ತಂದೆ ವಿಧಿವಶ.!

ಮಲಯಾಳಂ, ಕನ್ನಡ ಸೇರಿ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ ನಟಿ ಮೀರಾ ಜಾಸ್ಮಿನ್ ಅವರ ತಂದೆ ಜೋಸೆಫ್ ಫಿಲಿಪ್ ಕೇರಳದ ಎರ್ನಾಕುಲಂನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೀರಾ ಅವರ ತಂದೆ ವಯೋಸಹಜ ಖಾಯಿಲೆಯಿಂದ ನಿಧನರಾದರು ಎಂದು ವರದಿಗಳು ತಿಳಿಸಿದೆ. ಅವರ ಅಂತ್ಯಕ್ರಿಯೆ ಭಾನುವಾರ ಕೇರಳದಲ್ಲಿ ನಡೆಯಲಿದೆ.ನಟಿ ತನ್ನ ತಂದೆಯ ನಿಧನದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಮೀರಾ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. ಅವರ ಕೊನೆಯ ತೆಲುಗು ಚಿತ್ರ 2023 ರ ತೆಲುಗು ನಾಟಕ ‘ವಿಮಾನಂ’. ಮಲಯಾಳಂ ಚಿತ್ರ ‘ಕ್ವೀನ್ ಎಲಿಜಬೆತ್’ ನಲ್ಲಿಯೂ ಅವರು ಕಾಣಿಸಿಕೊಂಡರು. ಪುನೀತ್ ರಾಜ್ ಕುಮಾರ್ ಅಭಿನಯದ ಅರಸು ಚಿತ್ರದಲ್ಲಿ ಮೀರಾ ಜಾಸ್ಮಿನ್ ನಟಿಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read