ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಂದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನವನ್ನು ಸೀಜ್ ಮಾಡಲಾಗಿದೆ.
ಇಡಿ ಅಧಿಕಾರಿಗಳು 44 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಚಳ್ಳಕೆರೆ ಬ್ಯಾಂಕಿನ ಎರಡು ಲಾಕರ್ ನಲ್ಲಿದ್ದ ಚಿನ್ನ ವಶಕ್ಕೆ ಪಡೆಯಲಾಗಿದೆ. ಅಕ್ರಮ ಆನ್ಲೈನ್ ಗೇಮ್, ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ತನಿಖೆ ಮುಂದುವರೆದಿದೆ. ಈಗ 44 ಕೆಜಿ ಚಿನ್ನ ಸೀಜ್ ಮಾಡಲಾಗಿದೆ. ಇದುವರೆಗೆ 150 ಕೋಟಿ ರೂ. ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.