ರಾಜ್ಯದಲ್ಲಿ ಹಾಡಹಗಲೇ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ರೈತನ ಬೈಕ್ ನಲ್ಲಿದ್ದ 7 ಲಕ್ಷ ಹಣ ಲೂಟಿ ಹೊಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ. ಶ್ರೀನಿವಾಸ್ ರಾವ್ ಎಂಬುವವರು ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಬೈಕ್ ಬ್ಯಾಗ್ ನಲ್ಲಿಟ್ಟು ಹಣ್ಣು ಖರೀದಿಸಲು ಹೋಗಿದ್ದಾರೆ. ಇದನ್ನು ಗಮನಿಸುತ್ತಿದ್ದ ಖದೀಮರು ಬೈಕ್ ನಲ್ಲಿದ್ದ 7 ಲಕ್ಷ ರೂ ಹಣ ದೋಚಿದ್ದಾರೆ.
ಘಟನೆ ಸಂಬಂಧ ಶ್ರೀನಿವಾಸ್ ರಾವ್ ಪೊಲೀಸರಿಗೆ ದೂರು ನೀಡಿದ್ದು, ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.