BREAKING : ಬೆಂಗಳೂರಿನಲ್ಲಿ ತಪ್ಪಿದ ಮತ್ತೊಂದು ಭಾರಿ ಅನಾಹುತ : ನಡು ರಸ್ತೆಯಲ್ಲೇ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು

ಬೆಂಗಳೂರು : ರಾಜಧಾನಿ ಬೆಂಗಳೂರಿನಲಿ ಮತ್ತೊಂದು ಭಾರೀ ಅನಾಹುತ ತಪ್ಪಿದ್ದು, ನಡು ರಸ್ತೆಯಲ್ಲೇ ಕಾರು ಹೊತ್ತಿ ಉರಿದಿರುವ  ಘಟನೆ ನಡೆದಿದೆ.

ಬೆಂಗಳೂರಿನ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಪ್ಲೈಓವರ್‌ ಮೇಲೆ ಬೆಂಕಿ ಬಿದ್ದು ಕಾರು ಸುಟ್ಟು ಕರಕಲಾಗಿರುವ  ಘಟನೆ ತಡರಾತ್ರಿ ನಡೆದಿದೆ.

ರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿ ಮಗು ಸೇರಿ ಐವರು ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನ ಹಿಂಬದಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಹಿಂದಿನ ಕಾರಿನಲ್ಲಿದ್ದವರು ಕಾರಿಗೆ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ಬೆಂಕಿ ಆವರಿಸುವ ಮೊದಲೇ ಕಾರಿನಿಂದ ಇಳಿದಿದ್ದಾರೆ. ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read