BREAKING : ‘ಮುಡಾ’ ಹಗರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ : ‘ಸಿಎಂ ಸಿದ್ದರಾಮಯ್ಯ’ ಪತ್ನಿ ಬರೆದ ಪತ್ರದಲ್ಲಿ ಸಹಿಯೇ ನಕಲಿ..!

ಬೆಂಗಳೂರು : ಮುಡಾ ಹಗರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾಗೆ ಬರೆದ ಪತ್ರದಲ್ಲಿ ಸಹಿ ನಕಲಿ ಎಂದು ಬಿಜೆಪಿ ಆರೋಪಿಸಿದೆ.

ಟ್ವೀಟ್ ಮಾಡಿರುವ ಬಿಜೆಪಿ ನಾನೇ ಸತ್ಯ ಹರಿಶ್ಚಂದ್ರರ ಕೊನೆಯ ತುಂಡು ಎನ್ನುವ ರೀತಿ ಲಜ್ಜೆಬಿಟ್ಟು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ಭಂಡ ಮುಖ್ಯಮಂತ್ರಿ ಸಿದ್ದರಾಮ್ಯಅವರು ಜಗತ್ತಿನ ಮುಂದೆ ಸತ್ಯವನ್ನು ಮರೆಮಾಚಲು ಹೋಗಿ ಇದೀಗ ಬೆತ್ತಲಾಗಿದ್ದಾರೆ. ಮಾಹಿತಿ ಹಕ್ಕಿನಡಿ ಆರ್ಟಿಐ ಕಾರ್ಯಕರ್ತ ಪಡೆದ ಶ್ರೀಮತಿ ಪಾರ್ವತಿಯವರು ಮುಡಾಗೆ ಬರೆದ ಪತ್ರದಲ್ಲಿನ ಸಹಿಯೇ ಬೇರೆ ಇದೆ. ನಕಲಿರಾಮಯ್ಯನವರು ಟಾರ್ಚ್ ಬಿಟ್ಟು ತೋರಿಸಿದ ವೈಟ್ನರ್ ಹಿಂದಿನ ಸಾಲಿನ ಪತ್ರದ ಸಹಿಯೇ ಬೇರೆ ಇದೆ. ಭ್ರಷ್ಟ ಮುಖ್ಯಮಂತ್ರಿಗಳೇ, ಒಂದು ಸತ್ಯವನ್ನು ಮರೆಮಾಚಲು ಹೋಗಿ ಹಲವು ಸುಳ್ಳುಗಳನ್ನು ಹೇಳಿದ್ದೀರಿ. ಮುಖ್ಯಮಂತ್ರಿಯಾಗಿ ಸುಳ್ಳು ಸುದ್ದಿ ಹರಡುವುದಕ್ಕೆ ನಾಚಿಕೆ ಆಗುವುದಿಲ್ಲವೇ? ಮೊದಲು ರಾಜೀನಾಮೆ ಕೊಟ್ಟು ತೊಲಗಿ ಎಂದು ಬಿಜೆಪಿ ಕಿಡಿಕಾರಿದೆ.

https://twitter.com/BJP4Karnataka/status/1828695179806584968

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read