BREAKING : ‘ಬಿಗ್ ಬಾಸ್’ ನಿರೂಪಣೆಗೆ ನಟ ಕಿಚ್ಚ ಸುದೀಪ್ ಗುಡ್ ಬೈ, ಭಾವನಾತ್ಮಕ ಪೋಸ್ಟ್.!

ಬೆಂಗಳೂರು : ‘ಬಿಗ್ ಬಾಸ್’ ನಿರೂಪಣೆಗೆ ನಟ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ನನ್ನು ಕಳೆದ 11 ಸೀಸನ್ ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿಸಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫಿನಾಲೆ ನಿರೂಪಕನಾಗಿ ಕೊನೆಯದು, ಮತ್ತು ನಿಮ್ಮೆಲ್ಲರನ್ನೂ  ನಾನು ಅತ್ಯುತ್ತಮವಾಗಿ ರಂಜಿಸಿದ್ದೇನೆ  ಎಂದು ನಾನು ಭಾವಿಸುತ್ತೇನೆ. ಇದು ಮರೆಯಲಾಗದ ಪ್ರಯಾಣ, ಅದನ್ನು ನಾನು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಧನ್ಯವಾದಗಳು@ColorsKannada, ಈ ಅವಕಾಶಕ್ಕಾಗಿ. ಎಲ್ಲರಿಗೂ ತುಂಬಾ ಪ್ರೀತಿ ಮತ್ತು ಗೌರವ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್-11 ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಬಹಳ ಅಚ್ಚುಕಟ್ಟಾಗಿ, ಸೊಗಸಾಗಿ ನಡೆಸಿಕೊಡುತ್ತಿದ್ದಾರೆ. ಇವರ ಖಡಕ್ ಮಾತಿಗೆ, ಸ್ಪರ್ಧಿಗಳನ್ನು ಕ್ಲಾಸ್ ತೆಗೆದುಕೊಳ್ಳುವ ರೀತಿಗೆ, ಸ್ಪರ್ಧಿಗಳನ್ನು ಕಾಲೆಳೆಯುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಇನ್ಮುಂದೆ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ನಟ ಸುದೀಪ್ ಘೋಷಣೆ ಮಾಡಿದ್ದಾರೆ. ಸುದೀಪನ ಸಡನ್ ನಿರ್ಧಾರಕ್ಕೆ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read