ಬೆಂಗಳೂರು: ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್ ಅವರನ್ನು ಬಂಧಿಸಲಾಗಿದೆ.
ಸಂಭಾವನೆ ಕೂಡ ನೀಡದೆ ನಟಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಹೇಮಂತ್ ಅವರನ್ನು ಬಂಧಿಸಿದ್ದಾರೆ. 2022 ರಲ್ಲಿ ನಟಿಗೆ ನಟ ಹೇಮಂತ್ ಪರಿಚಯವಾಗಿದ್ದರು. ‘ರಿಚ್ಚಿ’ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿ ಕಿರುಕುಳ ನೀಡಿದ್ದಾರೆ. ಎರಡು ಲಕ್ಷ ರೂಪಾಯಿ ಸಂಬಾವನೆ ನೀಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಮುಂಗಡವಾಗಿ 60 ಸಾವಿರ ರೂಪಾಯಿಯನ್ನು ಹೇಮಂತ್ ನೀಡಿದ್ದರು. ಚಿತ್ರೀಕರಣ ತಡವಾಗಿದ್ದಕ್ಕೆ ನಟಿ ಬೇಸರಗೊಂಡಿದ್ದರು. ಅಶ್ಲೀಲ ಬಟ್ಟೆ ತೊಡಲು ಒತ್ತಾಯಿಸಿದ್ದರು ಎನ್ನಲಾಗಿದೆ.
ನಟಿಗೆ ಮಾಕ್ ಟೇಲ್ ನಲ್ಲಿ ಮದ್ಯ ಬೆರಸಿ ಮತ್ತು ಬರುವಂತೆ ಮಾಡಿ ಕೃತ್ಯ ಎಸಗಲಾಗಿದೆ. ಮತ್ತು ಬರಿಸಿ ಖಾಸಗಿ ಫೋಟೋ ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾಗಿ ಆರೋಪಿಸಲಾಗಿದೆ. 2023ರ ಆಗಸ್ಟ್ 5ರಂದು ಸುದ್ದಿಗೋಷ್ಠಿಗೆ ಮುಂಬೈಗೆ ಚಿತ್ರತಂಡ ತೆರಳಿದ್ದು, ನಟಿ ವಾಶ್ ರೂಮ್ ಗೆ ಹೋದಾಗ ಮದ್ಯ ಬೆರೆಸಿದ್ದರು. ಈ ವೇಳೆ ನಟಿ ಅಸ್ವಸ್ಥರಾಗಿದ್ದಾಗ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಲೈಂಗಿಕ ಕಿರುಕುಳ ನೀಡಿದ್ದು, ಸಂಭಾವನೆ ನೀಡದೇ ವಂಚಿಸಿರುವುದಾಗಿ ನಟಿ ದೂರು ನೀಡಿದ್ದು, ಹೇಮಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.