BREAKING : ಅಚ್ಚ ಕನ್ನಡದ ಖ್ಯಾತ ‘ನಿರೂಪಕಿ’ ಇನ್ನೂ ನೆನಪು ಮಾತ್ರ ; ಪಂಚಭೂತಗಳಲ್ಲಿ ‘ಅಪರ್ಣಾ’ ಲೀನ..!

ಬೆಂಗಳೂರು : ಅಚ್ಚ ಕನ್ನಡದ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಇಂದು ನೆರವೇರಿತು.

ಅಪರ್ಣಾ ಅಂತ್ಯಕ್ರಿಯೆ ವೇಳೆ ಅವರ ಪತಿ, ಕುಟುಂಬಸ್ಥರು ಹಾಗೂ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು, ಗಣ್ಯರು, ಸ್ನೇಹಿತರು ಹಾಜರಿದ್ದರು. ಪೊಲೀಸ್ ಗೌರವಗಳೊಂದಿಗೆ ಅಪರ್ಣಾ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಮನೆಗೆ ಮರಳಿದ್ದ ಅವರು ಬನಶಂಕರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅಪರ್ಣ ಅವರು 1984ರಲ್ಲಿ ತೆರೆಕಂಡ ‘ಮಸಣದ ಹೂವು’, ‘ಇನ್ಸ್ಪೆಕ್ಟರ್ ವಿಕ್ರಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದರು. ಯಾವುದೇ ಸರ್ಕಾರಿ ಸಮಾರಂಭ, ಕಾರ್ಯಕ್ರಮಗಳು ಇರಲಿ ಅಲ್ಲಿ ಅಪರ್ಣಾ ಬಹಳ ಸುಲಲಿತವಾಗಿ ನಿರೂಪಣೆ ಮಾಡುತ್ತಿದ್ದರು.

ಸಾವು ಸಮೀಪಿಸುತ್ತಿದೆ ಎಂಬುದು ನಟಿ ಅಪರ್ಣಾಗೆ ಗೊತ್ತಿದ್ದರೂ ಸ್ವಲ್ಪವೂ ಎದೆಗುಂದದೇ ಬಹಳ ಖುಷಿ ಖುಷಿಯಾಗಿ ಎಲ್ಲರ ಜೊತೆ ಮಾತನಾಡುತ್ತಾ ದಿನ ಕಳೆಯುತ್ತಿದ್ದರು. ಒಟ್ಟಿನಲ್ಲಿ ನಟಿ, ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read