ಶಿವಮೊಗ್ಗ: ದೀಪಾವಳಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಬಳ್ಳಿಗಾವಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು. ಮನೆಯೊಂದರ ಬಾಗಿಲ ಮುಂದೆ ಹೋರಿ ಬೆದರಿಸುವ ಸ್ಪರ್ಧೆ ನೋಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಹೋರಿ ಒಂದೆರಡು ಬಾರಿ ಮಹಾಲಿಂಗಪ್ಪ ಅವರನ್ನು ತಿವಿದು ಎತ್ತಿ ಹಾಕಿದೆ. ಸಣ್ಣಪುಟ್ಟ ಗಾಯಗಳಿಂದ ಮಹಾಲಿಂಗಪ್ಪ ಚೇತರಿಸಿಕೊಂಡಿದ್ದಾರೆ.
ಸಣ್ಣಪುಟ್ಟ ಗಾಯವಾಗಿತ್ತು. ದೇವರ ದಯೆಯಿಂದ ಆರಾಮಾಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇದೆಲ್ಲಾ ಸಹಜವೆಂದು ಮಹಾಲಿಂಗಪ್ಪ ತಿಳಿಸಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

