ಚಿಕ್ಕಬಳ್ಳಾಪುರ: ಮನೆ ಮಾರಾಟ ಮಾಡಿದ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ ದೊಡ್ಡಪ್ಪನನ್ನೇ ಪಾಪಿ ಪುತ್ರ ಹತ್ಯೆ ಮಾಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುರ್ರಂಪಲ್ಲಿಯಲ್ಲಿ ಘಟನೆ ನಡೆದಿದೆ. ನಾರಾಯಣಸ್ವಾಮಿ ಕೊಲೆಯಾದವರು ಎಂದು ಹೇಳಲಾಗಿದೆ. ಮಧುಸೂದನ ದೊಡ್ಡಪ್ಪನನ್ನೇ ಕೊಲೆ ಮಾಡಿದ ಆರೋಪಿ.
ಗಲಾಟೆಯ ವೇಳೆ ನಾರಾಯಣ ಸ್ವಾಮಿಯನ್ನು ಮಧುಸೂದನ್ ತಳ್ಳಿದ್ದಾನೆ. ಈ ವೇಳೆ ಮನೆಯ ಗೇಟ್ ತಗುಲಿ ನಾರಾಯಣಸ್ವಾಮಿ ಸಾವನ್ನಪ್ಪಿದ್ದಾರೆ. ಘಟನೆ ನಂತರ ಆರೋಪಿ ಮಧುಸೂಧನ ಪರಾರಿಯಾಗಿದ್ದಾನೆ. ಕೆಂಚರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
