BREAKING : 70ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಕಟ : ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ.!

ಡಿಜಿಟಲ್ ಡೆಸ್ಕ್ : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಿಷಭ್ ಶೆಟ್ಟಿ ಅತ್ಯುತ್ತಮ ನಟ, ಅಟ್ಟಂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ರಿಷಭ್ ಶೆಟ್ಟಿ ಭಾಜನರಾಗಿದ್ದಾರೆ.

ಮಲಯಾಳಂ ಚಿತ್ರ ಅಟ್ಟಮ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಕಾಂತಾರಾ ಅತ್ಯುತ್ತಮ ಚಿತ್ರ (ಆರೋಗ್ಯಕರ ಮನರಂಜನೆ) ಪ್ರಶಸ್ತಿಯನ್ನು ಗೆದ್ದರೆ, ಬ್ರಹ್ಮಾಸ್ತ್ರ ಅತ್ಯುತ್ತಮ ವಿಎಫ್ಎಕ್ಸ್ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಉಂಚೈ ಚಿತ್ರಕ್ಕಾಗಿ ಸೂರಜ್ ಆರ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಕೇಂದ್ರ ಸರ್ಕಾರದ ವಾರ್ತಾ, ಪ್ರಸಾರ ಇಲಾಖೆಯಿಂದ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಿಗೆ ಇಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕನ್ನಡದ ಕೆಜಿಎಫ್-2 ಚಿತ್ರಕ್ಕೆ ಎರಡು ಪ್ರಶಸ್ತಿ ಒಲಿದು ಬಂದಿದೆ. ಕೆಜಿಎಫ್-2 ಸಿನಿಮಾಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ಸಾಹಸ ವಿಭಾಗದಲ್ಲೂ ಕೆಜಿಎಫ್-2 ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ.

ಅತ್ಯುತ್ತಮ ಚಿತ್ರ: ಆಟ್ಟಂ
ಅತ್ಯುತ್ತಮ ನಟಿ: ಮಾನ್ಸಿ ಪರಾಖ್
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ
ಅತ್ಯುತ್ತಮ ಮನರಂಜನಾ ಚಿತ್ರ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಮಿಳು: ತಿರುಚಿತ್ರಂಬಲಂ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಲಂ (ತಮಿಳು)
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ): ಎ ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read