ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಗಿದ್ದು, 23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ 6 ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಪಾರ ಪ್ರಮಾಣದ ಹೈಡ್ರೋ ಗಾಂಜಾ ಎಮ್ ಡಿ ಎಮ್ಎ ಕ್ರಿಸ್ಟಲ್. ಅಫೀಮು ಜಪ್ತಿ ಮಾಡಿದ್ದಾರೆ.
ಕೆಜಿ ನಗರ ಠಾಣಾ ವ್ಯಾಪ್ತಿಯಲ್ಲಿ 3.81 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ. ಆರೋಪಿಗಳು ಅಂಚೆ ಕಚೇರಿಗೆ ಪಾರ್ಸಲ್ ಮೂಲಕ ಡ್ರಗ್ಸ್ ಕಳುಹಿಸುತ್ತಿದ್ದರು. ಪೋಸ್ಟ್ ಆಫೀಸ್ ನಲ್ಲಿ ಸಂಶಯಾಸ್ಪದ ಪಾರ್ಸೆಲ್ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಡ್ರಗ್ಸ್ ಪತ್ತೆ ಆಗಿದೆ. ಆರೋಪಿಗಳು ಅನುಮಾನ ಬಾರದೇ ಇರಲಿ ಎಂದು ಅಂಚೆ ಕಚೇರಿಗಳಿಗೆ ಪಾರ್ಸೆಲ್ ಪೋಸ್ಟ್ ಮಾಡುವ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.