ಲಡಾಖ್ : ಇಂದು ಬೆಳ್ಳಂಬೆಳಗ್ಗೆ ಲೇಹ್ ಮತ್ತು ಲಡಾಖ್ ಪ್ರದೇಶದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಇಂದು ಮುಂಜಾನೆ 4.33 ಗಂಟೆ ಸುಮಾರಿಗೆ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
4.5 ತೀವ್ರತೆಯ ಭೂಕಂಪವು 26-12-2023, 04:33:54 ಭಾರತೀಯ ಕಾಲಮಾನ, ಲಾಟ್: 34.73 ಮತ್ತು ಉದ್ದ: 77.07, ಆಳ: 5 ಕಿ.ಮೀ, ಸ್ಥಳ: ಲೇಹ್, ಲಡಾಖ್” ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.