ವಿಜಯಪುರ : 1998 ರ ಕೊಯಮತ್ತೂರು ಬಾಂಬ್ ಸ್ಪೋಟ ಕೇಸ್’ನ ಪ್ರಮುಖ ಆರೋಪಿ, ಉಗ್ರ ಸಾದಿಕ್ ಅಲಿಯಾಸ್ ಟೈಲರ್ ರಾಜಾನನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ.
ಕರ್ನಾಟಕದ ವಿಜಯಪುರದಲ್ಲಿ ತಮಿಳುನಾಡು ನಿಗ್ರಹ ಪಡೆ ( ಎಟಿಎಸ್ ) ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈತ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದನು. ಕೊಯಮತ್ತೂರು ಸ್ಪೋಟಕ್ಕೂ ಮುನ್ನ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದನು. 1998 ಫೆ.14ರಂದು ಅಡ್ವಾಣಿ ಅವರು ಕೊಯಮತ್ತೂರಿಗೆ ಚುನಾವಣಾ ಸಭೆಗೆ ಬಂದಿದ್ದರು. ಅಡ್ವಾಣಿ ಅವರ ಹತ್ಯೆ ಮಾಡಲುಕೊಯಮತ್ತೂರಿನ 12 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರಣಿ ಬಾಂಬ್ ಸ್ಪೋಟಿಸಲಾಗಿತ್ತು. ಆದರೆ ಅಡ್ವಾಣಿ ಅವರು ಪಾರಾಗಿದ್ದರು. 58 ಕ್ಕೂ ಹೆಚ್ಚು ಮಂದಿ ಮೃತಪಟ್ಟು. 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಈತ ವಿಜಯಪುರದಲ್ಲಿ ಕಳೆದ 12 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ವಿಜಯಪುರದಲ್ಲಿ ಠಿಕಾಣಿ ಹೂಡಿದ್ದ ಈತ ಹುಬ್ಬಳ್ಳಿ ಮೂಲದ ಯುವತಿಯನ್ನು ಮದುವೆಯಾಗಿದ್ದನು .
You Might Also Like
TAGGED:ಬಾಂಬ್ ಸ್ಪೋಟ